ಏನಿದು - "ಕೆಡಿಇ"?

ಕೆಡಿಇ (KDE or K Desktop Environment) ಎಂಬುದು ಅತ್ಯಂತ ಜನಪ್ರಿಯವಾದ ಮುಕ್ತ ಗಣಕತೆರೆ ವಾತಾವರಣ; ಪ್ರತಿಯೊಬ್ಬರಿಗೂ ಉಪಯುಕ್ತಕರವಾಗುವಂತಹ ಹಲವಾರು ಬಗೆಯ ತಂತ್ರಾಂಶಗಳ ಒಂದು ಸಮೂಹ. ಒಬ್ಬ ಗಣಕ ಬಳಕೆದಾರನಿಗೆ ಅವಶ್ಯಕವಾಗಿರುವ ಎಲ್ಲ ಬಗೆಯ ತಂತ್ರಾಂಶಗಳೂ ಇಲ್ಲಿ ಲಭ್ಯ .

  • ಕಚೇರಿ ಕೆಲಸಗಳಿಗೆ ಉಪಯುಕ್ತವಾಗುವಂತಹ ಪದಸಂಸ್ಕಾರಕ (word processor), ಲೆಕ್ಕದಹಾಳೆ (spreadsheet), ಪ್ರಸ್ತುತಿ ತಂತ್ರಾಂಶ (Presentation Software), ವಿಳಾಸಪಟ್ಟಿ, ಕ್ಯಾಲೆಂಡರ್, ಟಿಪ್ಪಣಿ ತಂತ್ರಾಂಶ, ವಯಕ್ತಿಕ ಸಂಘಟಕ ಇತ್ಯಾದಿ
  • ಅಂತರ್ಜಾಲ ತಂತ್ರಾಂಶಗಳು - ಜಾಲತಾಣ ವೀಕ್ಷಕ, ವಿ-ಅಂಚೆ ವೀಕ್ಷಕ, ಶೀಘ್ರಸಂದೇಶ ಇತ್ಯಾದಿ
  • ಮಲ್ಟಿಮೀಡಿಯಾ - ವೀಡಿಯೋ ಮತ್ತು ಆಡಿಯೋ ತಂತ್ರಾಂಶಗಳು
  • ಶಿಕ್ಷಣ ಮತ್ತು ಮನೋರಂಜನಾ ತಂತ್ರಾಂಶಗಳು
  • ಆಟಗಳು (ಕಂಪ್ಯೂಟರ್ ಗೇಮ್ಸ್)
  • ..ಇತ್ಯಾದಿ

ಕೆಡಿಇ ಮುಕ್ತತಂತ್ರಾಂಶ ಲೋಕದಲ್ಲಿ ಹತ್ತುಹಲವಾರು ಬಹುಮಾನಗಳನ್ನು ತನ್ನದಾಗಿಸಿಕೊಂಡಿದೆ.